'ಬಸವರಾಜ ವಿಳಾಸ' ಪತ್ರಕರ್ತ ವಿಕಾಸ್ ನೇಗಿಲೋಣಿ ಅವರ ಎರಡನೇ ಕಥಾಸಂಕಲನ. ಚಂದದ ಶೈಲಿ ಮತ್ತು ಮನಸ್ಸಿಗೆ ಮುದ ನೀಡುವ 16 ಕತೆಗಳು ಈ ಸಂಕಲನದಲ್ಲಿವೆ. 16 ಕತೆಗಳೂ ಒಂದಕ್ಕಿಂತ ಒಂದು ಭಿನ್ನ. ಹದಿನಾರು ಕತೆಗಳಲ್ಲಿ ನನ್ನನ್ನು ತುಂಬಾ ಕಾಡಿದ ಕತೆಗಳೆಂದರೆ ಗಡ್ಡದ ಲಕ್ಷ್ಮಮ್ಮ, ಚಿದಂಬರ ರಹಸ್ಯ, ಕಥಾ ಸಂಚಲನ, ಅವಶೇಷ, ಕೂರ್ಮಾವತಾರ ಮತ್ತು ಮಂಗನ ಕಾಯಿಲೆ.
ಬದುಕು ಪ್ರಾರಂಭವಾಗಿ, ವಿಕಾಸವಾಗುವ ಪಯಣ, ಕೊನೆಯಲ್ಲಿ ಹೊಸ ತಿರುವನ್ನು ಪಡೆಯುವ ಗಡ್ಡದ ಲಕ್ಷ್ಮಮ್ಮ, ಜೀವನಾವತಾರ ತೋರಿಸುವ ಕೂರ್ಮಾವತಾರ, ಬಸವರಾಜನ ವಿಳಾಸ ಯಾವುದು?.....
ಹೀಗೆ ಎಲ್ಲವನ್ನೂ ಓದಲು ನೀವೂ ಒಮ್ಮೆ "ಬಸವರಾಜ ವಿಳಾಸ (address not found)" ಕ್ಕೆ ಭೇಟಿ ನೀಡಲೇ ಬೇಕು!
ಕೃತಿಯ ಬೆನ್ನುಡಿಯಲ್ಲಿ ಪತ್ರಕರ್ತ, ವಿಮರ್ಶಕ ಹರೀಶ್ ಕೇರ ಅವರು ಹೇಳುವಂತೆ ವಿಕಾಸ್ ಕತೆಗಳಲ್ಲಿ ಒಂದು ವಿಲಕ್ಷಣ ಮ್ಯಾಜಿಕ್ ಇದೆ. ಇಲ್ಲಿನ ಕತೆಗಳು ಅಕ್ಷರಗಳಲ್ಲಿ ಮುಗಿದರೂ ಕಲ್ಪನೆಯಲ್ಲಿ ಓದುಗನೊಳಗೆ ನಾನಾ ಬಗೆಯಲ್ಲಿ ಮುಂದುವರಿಯುವ ವಿಕಾಸವಾದ!
ಹೀಗೆ ಹದಿನಾರು ಸುಂದರವಾದ, ವಿಶಿಷ್ಟವಾದ ಕತೆಗಳನ್ನು ನೀಡಿದ ವಿಕಾಸ ನೇಗಿಲೋಣಿ ಅವರಿಗೆ ನನ್ನಿ...
- ಎಂ.ಎಸ್.ಶೋಭಿತ್
No comments:
Post a Comment