'ಮಳೆಗಾಲ ಬಂದು ಬಾಗಿಲು ತಟ್ಟಿತು', 'ಬಸವರಾಜ ವಿಳಾಸ' ನಂತರ ವಿಕಾಸ ನೇಗಿಲೋಣಿ ಅವರು 'ಬ್ರಹ್ಮಚಾರಿಯ ಹೆಂಡತಿ ಮತ್ತು ಇತರರು' ಪುಸ್ತಕ ಬರೆದಿದ್ದಾರೆ.
ಸಹಜ, ಸುಂದರ ಅದಕ್ಕೂ ಮಿಗಿಲಾಗಿ ಸಿದ್ದಸೂತ್ರಗಳನ್ನು ಪಕ್ಕಕ್ಕಿಟ್ಟು, ಆಡಂಬರವಿಲ್ಲದ ಕಥೆಗಳು ಇಲ್ಲಿ ಕಾಣಸಿಗುತ್ತವೆ. ಕೆಲವು ಪಾತ್ರಗಳು ನಮ್ಮ ಸುತ್ತಮುತ್ತಲು ಎಲ್ಲೋ ಕಂಡಂತಹ ಅನುಭವವಾಗುವುದಂತು ಸುಳ್ಳಲ್ಲ.
ಹತ್ತೊಂಬತ್ತು ಅಂದದ ಕತೆಗಳಲ್ಲಿ ನನ್ನನ್ನು ತುಂಬಾ ಕಾಡಿದ ಕತೆಗಳೆಂದರೆ, ಬ್ಯುಸಿ ಟೋನ್ ಆನ್ ದಿಸ್ ನಂಬರ್, ಮಲ್ನಾಡದ ಗಿಣಿಯೇ ಅಲ್ಲಾಡದೇ ಕುಳಿತಿ ಯಾಕ?, ಅತಿಸಣ್ಣ ಕತೆ, ಬ್ರಹ್ಮಚಾರಿಯ ಹೆಂಡತಿ, ಎಲ್ಲಾ ನೋವುಗಳಿಗೂ ಒಂದೇ ದವಾಖಾನೆ, ನೆರಳಿನ ಬಣ್ಣ ಹಳದಿ.
ಹೆಂಡತಿಯೊಂದಿಗೆ ನಗರ ಸೇರಿರುವ ಮಗನ ಕರೆಗಾಗಿ ಕಾಯುತ್ತಿರುವ ಮಲೆನಾಡಿನ ಅಜ್ಜಿ ರುಕ್ಮಾವತಿ, ನಂತರ ಮಗನಿಗೆ ಫೋನ್ ಮಾಡಿದಳೋ ಇಲ್ಲವೋ ಎಂದು ತಿಳಿಯಲು 'ಬ್ಯುಸಿ ಟೋನ್ ಆನ್ ದಿಸ್ ನಂಬರ್' ಓದಬೇಕು.
ಏರ್‌ಫೋರ್ಟ್‌ನಲ್ಲಿ ಸಿಕ್ಕಿ ಕೆಲಕ್ಷಣದಲ್ಲೇ ಮಾಯವಾದ ಪ್ರೇಮಿಗಾಗಿ ಚಡಪಡಿಸುವ ರಾಜಿ ಕತೆ 'ಮಲ್ನಾಡದ ಗಿಣಿಯೇ ಅಲ್ಲಾದಡೇ ಕುಳಿತಿ ಯಾಕ?'. ವೇಶ್ಯೆಯ ಮನೆಯಲ್ಲಿ ಕೆಲಸಕ್ಕಿದ್ದುಕೊಂಡು ಬಳಿಕ ವೇಶ್ಯೆಯ ಮಗಳಲ್ಲಿ ಅನುರಾಗ ಹೊಂದುವ ಜಯಚಂದ್ರನ ಕತೆ ಎಲ್ಲಾ ನೋವುಗಳಿಗೂ ಒಂದೇ ದವಾಖಾನೆ.
35 ಕಳೆದರೂ ಮದುವೆಯಾಗದ ಭಗವತಿ ಬಳಿಕ ಮದುವೆಯಾದದ್ದು ಯಾರನ್ನ? ಮನೆಯವರು ತೋರಿಸಿದ ಹುಡುಗನೊಂದಿಗೆ ಮದುವೆಯಾದ ಸರೋಜ ನೆರಳಿನ ಮೂಲ ಹುಡುಕಲು ಹೊರಟಿದ್ದು ಯಾಕೆ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು "ಬ್ರಹ್ಮಚಾರಿಯ ಹೆಂಡತಿ ಮತ್ತು ಇತರರು" ತಪ್ಪದೇ ಓದಿ.
ಅಂದದ ಕತೆಗಳನ್ನು ನೀಡಿರುವ ಕತೆಗಾರ ವಿಕಾಸ ನೇಗಿಲೋಣಿ ಅವರಿಗೆ ಅಭಿನಂದನೆಗಳು ಮತ್ತು ಪ್ರೀತಿ.
ಇನ್ನಷ್ಟು ಕತೆ ಬರಲು ಎಂದು ಹಾರೈಕೆ.
----
ಎಂ.ಎಸ್.ಶೋಭಿತ್
No comments:
Post a Comment