Saturday, February 13, 2021

ಅಬಾಕಸ್ ಸಾಧನೆಯತ್ತ ಅನನ್ಯ ಭಾಗ್ವತ್ ಹೆಜ್ಜೆ


- ಎಂ.ಎಸ್.ಶೋಭಿತ್, ಮೂಡ್ಕಣಿ
ಚಿಕ್ಕವಯಸ್ಸಿನಲ್ಲೇ ಗಣಿತ ಮತ್ತು ಸಂಖ್ಯಾಶಾಸ್ತ್ರ ಸ್ಪರ್ಧೆ (ಅಬಾಕಸ್) ಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಗಮನಸೆಳೆಯುತ್ತಿರುವ ಪ್ರತಿಭೆ ಅನನ್ಯ ಭಾಗ್ವತ್.

ಹಂದಿಗೋಣದ ಕುಮಾರ್ ಭಾಗ್ವತ್ ಮತ್ತು ಚಂಪಕ ಭಾಗ್ವತ್ ದಂಪತಿಯ ಪುತ್ರಿ ಅನನ್ಯ ಅಬಾಕಸ್‌ನಲ್ಲಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ.

ಚಿಕ್ಕಂದಿನಿಂದಲೂ ಗಣಿತ ಮತ್ತು ಸಂಖ್ಯಾಶಾಸ್ತ್ರ (ಅಬಾಕಸ್)ದಲ್ಲಿ ಆಸಕ್ತಿಯಿತ್ತು. ತಂದೆ ತಾಯಿ ಮತ್ತು ಶಾಲಾ ಶಿಕ್ಷಕರಿಂದಲೂ ಸಾಕಷ್ಟು ಸ್ಪೂರ್ತಿ ದೊರೆಯಿತು. ಇದು 2017 ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಗಣಿತ ಮತ್ತು ಸಂಖ್ಯಾಶಾಸ್ತ್ರ ಸ್ಪರ್ಧೆಯಲ್ಲಿ (ಅಬಾಕಸ್) ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ಮೂರೂರಿನ ಪ್ರಗತಿ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿನಿ ಅನನ್ಯ ಭಾಗ್ವತ್ ಅವಳ ಮನದಾಳದ ಮಾತು. 

ಕಳೆದ ಎರಡು ವರ್ಷಗಳಿಂದ ಸಾಗರದ ವಿದ್ಯಾ ಮತ್ತು ಮಾರುತಿ ಅವರಲ್ಲಿ ಅಬಾಕಸ್ ಅಧ್ಯಯನ ಮಾಡುತ್ತಿದ್ದು, ರಾಷ್ಟ್ರೀಯ ಮಟ್ಟದ ಜೊತೆಗೆ ಜಿಲ್ಲಾ, ರಾಜ್ಯಮಟ್ಟದಲ್ಲಿಯೂ ಸಾಧನೆಗೈದಿದ್ದಾಳೆ.

ಮಗಳ ಸಾಧನೆಯ ಕುರಿತು ಹೆಮ್ಮೆಯಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತರಬೇತಿ ಕೊಡಿಸುವ ಆಸೆಯಿದೆ ಎನ್ನುತ್ತಾರೆ ಅನನ್ಯಾಳ ತಂದೆ ಕುಮಾರ್ ಭಾಗ್ವತ್.

No comments:

Post a Comment